ಓಂಕಾರದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಶ್ರೀ ಅನಿಲಕುಮಾರ್ ಟಿ ಡಿ ಯವರು ತಾಯ್ನಾಡಿಗೆ ಇಂದು ೩೦-ಅಗಸ್ಟ್-೨೦೧೩ರಂದು ಮರಳುತ್ತಿದ್ದು, ಓಂಕಾರ ಪರಿವಾರದ ಪರವಾಗಿ ಇತ್ತೀಚೆಗೆ ಅವರನ್ನು ಹೃದಯಪೂರ್ವಕವಾಗಿ ಬೀಳ್ಕೊಡಲಾಯಿತು, ಈ ಸಂದರ್ಭದಲ್ಲಿ ದೇವರು ಅವರಿಗೆ ಇದೆ ರೀತಿ ಸೇವೆಯ ಅವಕಾಶ, ಆಯುಷ್ಯ, ಸಮೃದ್ಧಿ, ಆರೋಗ್ಯ ಕಲ್ಪಿಸಲೆಂದು ಹಾರೈಸುತ್ತೇವೆ.
ಓಂಕಾರಕ್ಕೆ ಶ್ರೀ ಅನಿಲಕುಮಾರ ಅವರು ಸಲ್ಲಿಸಿದ ಸೇವೆ ಅಪಾರ ಮತ್ತು ಅಮೂಲ್ಯವಾದದ್ದು. ಓಂಕಾರದ ಉದ್ದೇಶ ಮತ್ತು ಸಂದೇಶವನ್ನು ಜನರ ಮನೆ ಮತ್ತು ಮನಗಳಿಗೆ ತಲುಪಿಸಿ, ಓಂಕಾರದ ಇಂದಿನ ಯಶಸ್ಸಿಗೆ ಒಂದು ಪ್ರಮುಖ ಶಕ್ತಿಯಾಗಿದ್ದವರು. ಅವರ ಆಧ್ಯಾತ್ಮಿಕ ಚಿಂತನೆ ಮತ್ತು ಕಳಕಳಿ ಓಂಕಾರಕ್ಕೆ ಒಂದು ಮಾನದಂಡವಾಗಿದೆ.